Editor Posts

full ad 2 here

home 2-1

half 2-1

full ad 3 here

ಕೇಂದ್ರ ಸರ್ಕಾರ

Also Read

2) ಜ್ಞಾನ ರಚನೆಗೆ ಇರುವ ಅವಕಾಶಗಳು:
•    ಭಾರತ ದೇಶದ ಅಖಂಡತೆಯ ಪರಿಕಲ್ಪನೆ
•    ಭಾರತದಲ್ಲಿನ ಸರಕಾರ ಮತ್ತು ಆಡಳಿತಾತ್ಮಕ ವ್ಯವಸ್ಥೆ
•    ಸರಕಾರ ವ್ಯವಸ್ಥೆಯ ಅಂಗಗಳು
•    ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಪರಿಕಲ್ಪನೆ
•    ಕೇಂದ್ರ ಸರ್ಕಾರದ ಶಾಸಕಾಂಗದಲ್ಲಿನ ಮೇಲ್ಮನೆ, ಕೆಳಮನೆಗಳ ರಚನೆ
•    ಸದಸ್ಯತ್ವ, ಅರ್ಹತೆ, ಕಾರ್ಯಗಳು
•    ಕೇಂದ್ರ ಕಾರ್ಯಾಂಗ
•    ರಾಷ್ಟ್ರಪತಿಯವರ ಆಯ್ಕೆ, ಅರ್ಹತೆ ಮತ್ತು ಅಧಿಕಾರಗಳು
•    ಪ್ರಧಾನಮಂತ್ರಿ ಆಯ್ಕೆ, ಅರ್ಹತೆ ಮತ್ತು ಅವರ ಕಾರ್ಯಗಳು ಹಾಗೂ -(ಮಂತ್ರಿಮಂಡಲ ರಚಸಿ)
•    ನ್ಯಾಯಾಂಗ ವ್ಯವಸ್ಥೆ
•    ನ್ಯಾಯಾಂಗದೊಳಗಣ ಒಕ್ಕೂಟ ವ್ಯವಸ್ಥೆ ಉಚ್ಛ-ಸರ್ವೋಚ್ಛ ನ್ಯಾಯಾಲಯಗಳ ಜವಾಬ್ದಾರಿ ಮತ್ತು ಕಾರ್ಯಗಳು.
3) ವಿಮರ್ಶಾಯುಕ್ತ ಶಿಕ್ಷಣಕ್ರಮ ಅಳವಡಿಕೆಗೆ ಇರುವ ಅವಕಾಶಗಳು
•    ಭಾರತವು ಸಾರ್ವಭೌಮ ಸ್ವತಂತ್ರ್ಯ ಪ್ರಜಾಸತ್ತಾತ್ಮಕ ರಾಜ್ಯವಾಗಿರುವುದಲ್ಲದೆ ಸಂವಿಧಾನಬದ್ಧವಾದ ಒಕ್ಕೂಟ ವ್ಯವಸ್ಥೆಯ ಒಳಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕಾರ್ಯನಿರ್ವಹಿಸುತ್ತಿದ್ದು, ರಾಷ್ಟ್ರದ ಏಕತೆಯನ್ನು ಪ್ರತಿಬಿಂಬಿಸಿ ಜಾತ್ಯಾತೀತ ಪರಿಕಲ್ಪನೆಯ ಹಿನ್ನಲೆಯನ್ನು ಜಗತ್ತಿನ ಅಮೇರಿಕಾ, ಫ್ರಾನ್ಸ್, ಇಂಗ್ಲೆಂಡ್ ದೇಶಗಳ ಸರಕಾರ ವ್ಯವಸ್ಥೆಯೊಂದಿಗೆ ಹೋಲಿಸಿ ಅರ್ಥೈಸಿಕೊಳ್ಳುವರು.
•    ಕೇಂದ್ರ ಸರ್ಕಾರದ ಬಹುಮುಖ್ಯ ಅಂಗವಾದ ಶಾಸಕಾಂಗವನ್ನು ಸಂಸತ್ತು ಎಂದು ಕರೆಯುತ್ತಿರುವ ಹಿನ್ನಲೆಯಲ್ಲಿ, ಸಂಸತ್ತು ಅದರ ಅರ್ಥ. ಇಲ್ಲಿನ ದ್ವಿಸದನ ವ್ಯವಸ್ಥೆಯನ್ನು (ಲೋಕಸಭೆ, ರಾಜ್ಯಸಭೆ) ಸಂವಿಧಾನದ 79ನೇ ವಿಧಿಯ ಅನ್ವಯ ಪ್ರಜಾತಂತ್ರೀಯ ವ್ಯವಸ್ಥೆಯ ರಚನೆಯ ಅಡಿಯಲ್ಲಿ ತಿಳಿಯುವುದು.
•    ಸಂಸತ್ತಿನ/ಪಾರ್ಲಿಮೆಂಟ್ `ಮೇಲ್ಮನೆಗೆ' ಸಂಬಂಧಿಸಿದಂತೆ, ಸಂವಿಧಾನ ಬದ್ಧವಾಗಿ ಇದರ ರಚನೆ, ಸದಸ್ಯರ ಸಂಖ್ಯೆ ಮತ್ತು ಆಯ್ಕೆ ಕುರಿತಂತೆ ರಾಷ್ಟ್ರಪತಿಯವರ ಜವಾಬ್ದಾರಿಗಳನ್ನು ತಿಳಿಯುತ್ತಾ ಈ ಖಾಯಂ ಸದನ ಸದಸ್ಯರ ಅರ್ಹತೆಗಳು, ಚುನಾವಣೆ ಮತ್ತು ನಾಮಕರಣ ಸದಸ್ಯರ ನೇಮಕಾತಿ ಹಾಗೂ ಸಭಾಪತಿ ಪ್ರಕ್ರಿಯೆಯನ್ನು ಪ್ರಜಾಸತ್ತಾತ್ಮಕ ಪರಿಕಲ್ಪನೆ ಅಡಿಯಲ್ಲಿ ಅರ್ಥೈಸಿಕೊಳ್ಳುವರು.
•    ಸಂಸತ್ತಿನ ಜನತಾ ಸದನ ಎಂದೇ ಕರೆಯಲ್ಪಡುತ್ತಿರುವ ಲೋಕಸಭೆಯ ರಚನೆ, ಇಲ್ಲಿನ ಸದಸ್ಯರ ಸಂಖ್ಯೆ (ಮೀಸಲಾತಿ ಮತ್ತು ನಾಮಕರಣ ಸದಸ್ಯರನ್ನು ಒಳಗೊಂಡಂತೆ) ಸದಸ್ಯರ ಅರ್ಹತೆ, ಅಧಿಕಾರದ ಅವಧಿಯನ್ನು ಈ ಪ್ರಜಾ ಪ್ರತಿನಿಧಿ, ವ್ಯವಸ್ಥೆಯ ಅಡಿಯಲ್ಲಿನ ಚುನಾವಣೆಗಳ ಪಾವಿತ್ರದೊಂದಿಗೆ, ಪ್ರಜೆಗಳೇ ಪ್ರಭುಗಳಾಗಿರುವ ಹಿನ್ನಲೆಯ ಮಹತ್ವವನ್ನು ಅರಿಯುವರು.
•    ಪ್ರಜಾಪ್ರಭುತ್ವ ಸರಕಾರ ವ್ಯವಸ್ಥೆಯಲ್ಲಿ ಸಂಸತ್ತಿನ ಕೆಳಮನೆಯಾದ ಲೋಕಸಭೆಗೆ ಪವಿತ್ರವಾದ ಸ್ಥಾನವಿದ್ದು, ರಾಷ್ಟ್ರದ ಪ್ರಗತಿಗೆ ಪೂರಕವಾಗುವ ಕಾರ್ಯಕಲಾಪಗಳನ್ನು ಸದನದಲ್ಲಿ ನಡೆಸಲು, ಸರ್ವಸದಸ್ಯರೂ ಒಬ್ಬ ಸಭಾಧ್ಯಕ್ಷ ಹಾಗೂ ಉಪಾಧ್ಯಕ್ಷರನ್ನು ಹೇಗೆ ಆಯ್ಕೆ ಮಾಡಲಾಗುತ್ತದೆ ಹಾಗೂ ಆಯ್ಕೆಯಾದ ಅಧ್ಯಕ್ಷರ ಅಧಿಕಾರದ ವ್ಯಾಪ್ತಿಯನ್ನು ಸಂವಿಧಾನದ ನಿರ್ದೇಶನದ ಅಡಿಯಲ್ಲಿ ಚರ್ಚಾತ್ಮಕವಾಗಿ ತೀರ್ಮಾನಿಸುವರು. ಈಗಿನ ಲೋಕಸಭೆಯ ಸಭಾಧ್ಯಕ್ಷರು ಮೀರಾಕುಮಾರ್, ಉಪಸಭಾಧ್ಯಕ್ಷರು ಮಹಮದ್ ಅನ್ಸಾರಿ.
•    ಕೇಂದ್ರ ಸರ್ಕಾರದ ಶಾಸಕಾಂಗ ವ್ಯವಸ್ಥೆಯ ಕೆಳಮನೆಯಾದ (ಲೋಕಸಭೆಯಲ್ಲಿ ಬಹುಮತ ಪಡೆದ ಪಕ್ಷದ ಸದಸ್ಯರು, ಜೊತೆಗೆ ವಿರೋಧಪಕ್ಷವೆಂದು ಮಾನ್ಯತೆ ಪಡೆದ ಪಕ್ಷದ ಸದಸ್ಯರು ಮತ್ತು ಉಳಿದ ಎಲ್ಲಾ ಚುನಾಯಿತ ಸದಸ್ಯರು ಕಲಾಪ ಸಂದರ್ಭಗಳಲ್ಲಿ ತಪ್ಪದೇ ಹಾಜರಿರುತ್ತಾರೆ. ಈ ಸಂದರ್ಭದಲ್ಲಿ ವಿರೋಧ ಪಕ್ಷದ ನಾಯಕನೊಬ್ಬನನ್ನು ಆಯ್ಕೆ ಮಾಡಲಾಗುವುದಲ್ಲದೆ ಈತನು, ಅಧಿಕಾರ, ಕಾರ್ಯವ್ಯಾಪ್ತಿ ಸದನದಲ್ಲಿ ಪ್ರಧಾನಮಂತ್ರಿಗೆ ಸರಿಸಮನಾದ ಗೌರವ ಮನ್ನಣೆ, ಸವಲತ್ತುಗಳನ್ನು ಹೊಂದಿರುತ್ತಾನೆ. ಜೊತೆಗೆ ವಿರೋಧ ಪಕ್ಷದ ನಾಯಕನೆನಿಸಿಕೊಂಡವನು, ಜನತೆಯ ಪರವಾಗಿ ಸಮಾಜಮುಖಿ ಚಿಂತನೆಗಳ ಚೌಕಟ್ಟಿನಲ್ಲಿ ಸದನವನ್ನು ಪ್ರತಿನಿಧಿಸುವ ಗುರುತರ ಹೊಣೆಗಾರಿಕೆಯನ್ನು ಪಡೆದಿರುವ ಸಂವಿಧಾನಬದ್ಧ ಶ್ರೇಷ್ಠತೆಯನ್ನು ಗ್ರಹಿಸಿಕೊಳ್ಳುವರು ಕೇಂದ್ರದ ಈಗಿನ ವಿರೋಧ ಪಕ್ಷದ ನಾಯಕಿ ಶ್ರೀಮತಿ ಸುಷ್ಮ ಸ್ವರಾಜ್.
•    ಸಂಸತ್ತು ಮೂಲಭೂತವಾಗಿ ಕಾನೂನು ಮಾಡುವ ಅಂಗವಾಗಿದ್ದು, ರಾಷ್ಟ್ರದ ಯಾವುದೇ ವಿಷಯಕ್ಕೆ ಸಂಬಂಧಿಸಿದ ಮಸೂದೆಯು ಸಂಸತ್ತಿನಲ್ಲಿ ಬಹುಮತ ಪಡೆದುಕೊಳ್ಳಬೇಕಾಗುತ್ತದೆ. ಅಂದರೆ ಪ್ರಜಾಪ್ರಭುತ್ವ ವ್ಯವಸ್ಥೆಯಡಿಯಲ್ಲಿ ಬಹುಮತಕ್ಕಿರುವ ಮಹತ್ವವನ್ನು ಅರ್ಥೈಸಿಕೊಳ್ಳುವರು. ಹಾಗೂ ಮಸೂದೆ ಶಾಸನವಾಗುವಲ್ಲಿ ರಾಷ್ಟ್ರಪತಿಗಳು ಕೈಗೊಳ್ಳುವ ತೀರ್ಮಾನಗಳನ್ನು ಸಭಾಧ್ಯಕ್ಷರ ಪಾತ್ರವನ್ನು ಅವಲೋಕಿಸಿ ತಿಳಿದುಕೊಳ್ಳುವರು.
•    ಸಂಸತ್ತಿನ ಆಡಳಿತಾಧಿಕಾರವನ್ನು ಹೊಂದಿರುವ ಪ್ರಧಾನಮಂತ್ರಿ ಮತ್ತು ಆತನ ಮಂತ್ರಿಮಂಡಲದ ಜವಾಬ್ದಾರಿ ನಿಜವಾದ ಕಾರ್ಯಾಂಗವಾಗಿ ಅದು ಕೈಗೊಳ್ಳುವ ತೀರ್ಮಾನಗಳನ್ನು ಚರ್ಚಿಸುವುದಲ್ಲದೆ ಈ ಮಂತ್ರಿ ಮಂಡಲವು ಸಂಸತ್ತಿನ ವಿಶ್ವಾಸವನ್ನು ಕಳೆದುಕೊಳ್ಳುವ ಹಾಗೂ ರಾಜೀನಾಮೆ ನೀಡುವ ಸಂದರ್ಭಗಳನ್ನು ಸಂವಿಧಾನಾತ್ಮಕ ಹಿನ್ನಲೆಯಲ್ಲಿ ವಿಶ್ಲೇಷಿಸುವರು.
•    ಹಣಕಾಸಿನ ಮಸೂದೆಯನ್ನು ಲೋಕಸಭೆಯಲ್ಲಿಯೇ ಏಕೆ ಮಂಡಿಸಲಾಗುತ್ತದೆ. ಈ ಹಣಕಾಸು ಮಸೂದೆಗೆ ಸಂಬಂಧಿಸಿದಂತೆ ರಾಜ್ಯಸಭೆಯ ಪಾತ್ರವೇನು? ಎಂಬುದನ್ನು ಲೋಕಸಭೆಯ ಹಣಕಾಸಿನ ಅಧಿಕಾರದ ವ್ಯಾಪ್ತಿಯ ಸಂವಿಧಾನದಬದ್ಧ ಚೌಕಟ್ಟಿನೊಳಗೆ ಅವಲೋಕಿಸುವರು.
•    ಸಂಸತ್ತಿನ ಅಧಿಕಾರದ ಪರಿಧಿಯೊಳಗೆ ಬರುವ ನ್ಯಾಯಾಂಗದ ಮುಖ್ಯಸ್ಥರುಗಳಾದ ಮುಖ್ಯ ನ್ಯಾಯಾಧೀಶರನ್ನು ಪದಚ್ಯುತಗೊಳಿಸುವ ಸಂದರ್ಭ ಹೇಗೆ ಎನ್ನುವ ವಿಚಾರದಲ್ಲಿ ಪ್ರಜಾಪ್ರತಿನಿಧಿ ಸಭೆಯಂತಿರುವ ಸಂಸತ್ತಿನ ಶ್ರೇಷ್ಠತೆಯನ್ನು ಪ್ರಜಾತಂತ್ರ ವ್ಯವಸ್ಥೆಯಲ್ಲಿ ಶ್ಲಾಿಸುವರು.
•    ಸಂಸತ್ತಿಗೆ ನಮ್ಮ ಸಂವಿಧಾನವನ್ನು ತಿದ್ದಪಡಮಾಡುವ ಅಧಿಕಾರವನ್ನು ನೀಡಲಾಗಿದ್ದು, ಅದು ಹೇಗೆ? ಯಾವ ಸಂದರ್ಭಗಳು ಎನ್ನುವುದನ್ನು ಅರ್ಥೈಸಿಕೊಳ್ಳುವುದಲ್ಲದೆ ನ್ಯಾಯಾಂಗದ ಚೌಕಟ್ಟನ್ನು ನಿಯಂತ್ರಿಸುವ, ನ್ಯಾಯಾಲಯಗಳನ್ನು ಸ್ಥಾಪಿಸುವ, ಗಡಿರೇಖೆ ಹೊಸ ರಾಜ್ಯಗಳ ಸೃಷ್ಟಿ, ರಾಜ್ಯಗಳ ಹೆಸರು ಬದಲಾವಣೆ, ಕೇಂದ್ರದ ವಿವಿಧ ಆಯೋಗಗಳ ರಚನೆ, ವರದಿಗಳ ಬಗೆಗಿನ ಚರ್ಚೆ, ಹಾಗೂ ತುರ್ತು ಪರಿಸ್ಥಿತಿಯನ್ನು ಕುರಿತಂತೆ ಯಾವುದೇ ನಿರ್ಣಾಯಕ ತೀರ್ಮಾನಗಳನ್ನು ಕುರಿತಂತೆ ಸಂಸತ್ತಿನ ಕಾರ್ಯವ್ಯಾಪ್ತಿಯಲ್ಲಿ ಚರ್ಚಿಸಿ ಒಪ್ಪಿಕೊಳ್ಳುವರು.
•    ಕೇಂದ್ರ ಸರ್ಕಾರದ ಕಾರ್ಯಾಂಗ, ಇದರೊಳಗಿನ ರಾಷ್ಟ್ರಪತಿ ಮತ್ತು ಪ್ರಧಾನಮಂತ್ರಿ, ಮಂತ್ರಿ ಮಂಡಲದ ವ್ಯಾಪ್ತಿ ಏನೆಂಬುದನ್ನು ಚರ್ಚಿಸುವರು.
•    ಸಂವಿಧಾನದ 52ನೇ ವಿಧಿಯ ಅನ್ವಯ ರಾಷ್ಟ್ರಪತಿಯವರ ಅಧಿಕಾರ ವ್ಯಾಪ್ತಿಯನ್ನು ಅರ್ಥೈಸಿಕೊಂಡು, ಸಂವಿಧಾನದ 54 ಮತ್ತು 55ನೇ ವಿಧಿಯ ನಿರ್ದೇಶನದಂತೆ ಪ್ರಥಮ ಪ್ರಜೆ ರಾಷ್ಟ್ರಪತಿಯ ಅರ್ಹತೆ ಹಿನ್ನಲೆಯಲ್ಲಿ ನೇಮಕ ಆಯ್ಕೆ ಮಾಡಲಾಗುತ್ತದೆ ಎಂಬುದನ್ನು ಸಂವಿಧಾನದ ನಿರ್ದೇಶನದಂತೆ ಅವಲೋಕಿಸುವರು.
•    ರಾಷ್ಟ್ರದ ಮೊದಲ ಪ್ರಜೆ ರಾಷ್ಟ್ರಪತಿಯವರ ಪ್ರಜಾಸತ್ತಾತ್ಮಕ ಅಧಿಕಾರಗಳನ್ನು ಅರ್ಥೈಸಿಕೊಳ್ಳುವ ಹಿನ್ನಲೆಯಲ್ಲಿ, ಕಾರ್ಯಾಂಗಾಧಿಕಾರ, ನ್ಯಾಯಾಂಗಾಧಿಕಾರ ಶಾಸನಾಧಿಕಾರ, ಹಣಕಾಸಿನ ಅಧಿಕಾರ, ಮಿಲಿಟರಿ ಅಧಿಕಾರ, ತುರ್ತು ಪರಿಸ್ಥಿತಿಯ ಅಧಿಕಾರ ಹಾಗೂ ವಿವೇಚನಾಧಿಕಾರಿಗಳನ್ನು ಒಳಗೊಂಡಂತೆ ಈ ಅಧಿಕಾರಗಳ ವ್ಯಾಪ್ತಿ, ಪ್ರಾಮುಖ್ಯತೆಯ ಸಂದರ್ಭದಲ್ಲಿ ರಾಷ್ಟ್ರದ ಅಖಂಡತೆಯ ಮಹತ್ವವನ್ನು ಕಾಪಾಡುವ ರಾಷ್ಟ್ರಪತಿಯವರ ಕಾರ್ಯವ್ಯಾಪ್ತಿಯನ್ನು ವಿಮರ್ಶಿಸಿ ತೀರ್ಮಾನ ಕೈಗೊಳ್ಳುವುದು.
ಉದಾ : - ವೀರಪ್ಪನ್ ಸಹಚರರಿಗೆ ಗಲ್ಲುಶಿಕ್ಷೆ ವಿಧಿಸುವ ವಿಚಾರ
- ಕ್ರಿ.ಶ. 2008ರಲ್ಲಿ ಕರ್ನಾಟಕದಲ್ಲಿ ತುರ್ತು ಪರಿಸ್ಥಿತಿ ೋಷಣೆ
- ಕಸಬ್ಗೆ ಗಲ್ಲು.
•    ರಾಷ್ಟ್ರದ ಮುಖ್ಯಸ್ಥರಾಗಿ ರಾಷ್ಟ್ರಪತಿಯವರನ್ನು ಸರ್ಕಾರದ ಮುಖ್ಯಸ್ಥರಾಗಿ ಪ್ರಧಾನಮಂತ್ರಿಯ ನಡುವಿನ ಅಧಿಕಾರದ ಸಾಮ್ಯತೆ, ವ್ಯತ್ಯಾಸ, ಸಹಕಾರವನ್ನು ತಿಳಿದುಕೊಳ್ಳುವರು.
•    ಸರಕಾರದ ಮುಖ್ಯಸ್ಥರಾದ ಪ್ರಧಾನಮಂತ್ರಿಗಳು ಅಧಿಕಾರಗಳಾದ ಮಂತ್ರಿಮಂಡಲ ನೇಮಕದೊಂದಿಗೆ ಖಾತೆಗಳನ್ನು ಮಂತ್ರಿಗಳ ಸಾಮಥ್ರ್ಯಾನುಸಾರ ಹಂಚಿಕೆ ಮಾಡಿ ಸಚಿವ ಸಂಪುಟ ಸಂಪೂರ್ಣ ಜವಾಬ್ದಾರನಾಗಿ ರಾಷ್ಟ್ರರಕ್ಷಣೆ, ಯೋಜನೆ ಹಾಗೂ ಕಾಳಜಿಯುಕ್ತ ವಿದೇಶೀ ನೀತಿಯ ಅನುಷ್ಠಾನದೊಂದಿಗೆ, ರಾಷ್ಟ್ರ, ರಾಷ್ಟ್ರಪತಿ ಹಾಗೂ ಮಂತ್ರಿಮಂಡಲಗಳ ನಡುವೆ ಸಂಬಂಧ ಕಲ್ಪಿಸುವಲ್ಲಿ ಪ್ರಧಾನ ಮಂತ್ರಿಯವರ ಕಾರ್ಯಕ್ಷಮತೆ ಯನ್ನು ವಿಶ್ಲೇಷಿಸಿಕೊಳ್ಳುವರು.
ಉದಾ : - 2 ಜಿ. ತರಂಗಾಂಗತರ ಹಗರಣ
- ಕಲ್ಲಿದ್ದಲು ಹಗರಣ
- ಶಸ್ತ್ರಾಸ್ತ್ರಗಳ ಕೊಳ್ಳುವಿಕೆಯ ಹಗರಣ
- ಬೋಫೋರ್ಸ್ ಹಗರಣ ಇತ್ಯಾದಿ.
- ಭಾರತ ಮತ್ತು ಪಾಕಿಸ್ತಾನದ ನಡುವಿನ ಭಯೋತ್ಪಾದಕ ಚಟುವಟಿಕೆಗಳು
•    ಸರಕಾರದ ನ್ಯಾಯಾಂಗ ವ್ಯವಸ್ಥೆಯಲ್ಲಿ ಭಾರತದ ಮಟ್ಟಿಗೆ ಸರ್ವೋಚ್ಛ ನ್ಯಾಯಾಲಯವೇ ರಾಷ್ಟ್ರದ ಅತ್ಯುನ್ನತ ನ್ಯಾಯಾಲಯವಾಗಿದ್ದು, ಇದು ಇತರ ಅಧೀನ ನ್ಯಾಯಾಲಯಗಳನ್ನು ಹೇಗೆ ನಿಯಂತ್ರಿಸುತ್ತದೆ ಮತ್ತು ನ್ಯಾಯ, ಸಂವಿಧಾನ ಶಾಸನ ಸಂಪ್ರದಾಯಗಳನ್ನು ಇದು ರಕ್ಷಿಸುವ ಹೊಣೆಗಾರಿಕೆಯ ಚೌಕಟ್ಟಿನಲ್ಲಿ ಏಕರೂಪ ನ್ಯಾಯಾಂಗ ವ್ಯವಸ್ಥೆಯನ್ನು ಅರ್ಥೈಸಿಕೊಳ್ಳುವುದು.
•    ಸರ್ವೋಚ್ಛ ನ್ಯಾಯಲಯದ ನ್ಯಾಯಾಧೀಶರ ನೇಮಕಕ್ಕೆ ಸಂಬಂಧಿಸಿದಂತೆ, ಈತನಿಗೆ ಇರಬೇಕಾದ ಅರ್ಹತೆ, ನೇಮಕಾತಿ ಮಾನದಂಡವನ್ನು ಸಂವಿಧಾನದ ನಿರ್ದೇಶನದಂತೆ ತಿಳಿದುಕೊಂಡು, ಮುಖ್ಯ ನ್ಯಾಯಧೀಶರ ಕಾರ್ಯವ್ಯಾಪ್ತಿಯನ್ನು ಅವಲೋಕಿಸುವರು.
•    ಒಕ್ಕೂಟ ನ್ಯಾಯಾಂಗ ವ್ಯವಸ್ಥೆಯಲ್ಲಿ ರಚನೆಯಾಗಿರುವ ರಾಷ್ಟ್ರದ ತಾಲ್ಲೂಕು ಹಂತದ ನ್ಯಾಯಾಲಯಗಳಾದ ಹಿರಿಯ ಶ್ರೇಣಿ ನ್ಯಾಯಾಲಯಗಳು ಮತ್ತು ಚೀಫ್ ಜುಡೀಷಿಯಲ್ ನ್ಯಾಯಾಲಯಗಳು, ಜಿಲ್ಲಾ ಹಂತದಲ್ಲಿ ಸೆಷನ್ ನ್ಯಾಯಾಲಯಗಳು ಹಾಗೂ ರಾಜ್ಯ ಹಂತದಲ್ಲಿ ಉಚ್ಛ ನ್ಯಾಯಾಲಯಗಳ ಸ್ಥಾಪನೆ ಮಾಡಲಾಗಿದ್ದು, ಆಯಾ ಹಂತದ ಈ ನ್ಯಾಯಾಲಯಗಳ ಕಾರ್ಯವ್ಯಾಪ್ತಿಯನ್ನು ಕೂಲಂಕುಶವಾಗಿ, ಅರ್ಥೈಸಿಕೊಂಡು ವಿಶ್ಲೇಷಿಸುವರು.
4) ಜ್ಞಾನ ಪುನರ್ರಚನೆಗಿರುವ ಅವಕಾಶಗಳು
•    ಭಾರತದ ಪ್ರಜಾಪ್ರಭುತ್ವವು ಸ್ವಾತಂತ್ರ್ಯ ಸಮಾನತೆ, ಸಮಾಜವಾದಿ, ಜಾತ್ಯತೀತ ನಿಲವುಗಳೊಂದಿಗೆ ರಾಷ್ಟ್ರದ ಅಖಂಡತೆಯನ್ನು, ಸಾರ್ವಭೌಮತ್ವವನ್ನು ಕಂಡುಕೊಂಡಿರುವ ಹಿನ್ನಲೆಯಲ್ಲಿ ಮಕ್ಕಳು ತಮ್ಮ ಕುಟುಂಬ ಮತ್ತು ಸುತ್ತಲಿನ ಸಮಾಜದ ಏಳಿಗೆಗೆ ಜಾತ್ಯತೀತ ಮನೋಭಾವದ ಸ್ವತಂತ್ರ್ಯ ವಿಚಾರಗಳು ತಮ್ಮ ತಮ್ಮ ವ್ಯಕ್ತಿತ್ವ ಮತ್ತು ಬದುಕನ್ನು ರೂಪಿಸಿಕೊಳ್ಳಲು ಬೇಕಾದ ಜ್ಞಾನವನ್ನು ಕಟ್ಟಿಕೊಳ್ಳುವ ಮನಸ್ಥಿತಿಯನ್ನು ಹೊಂದುವರು.
ಉದಾ : - ಕೂಡಿ ಊಟ ಮಾಡುವುದು
- ಒಟ್ಟಾಗಿ ಆಟವಾಡುವುದು
- ಹಬ್ಬ ಜಾತ್ರೆಗಳಲ್ಲಿ ಪರಸ್ಪರ ಬೆರೆಯುವುದು
•    ರಾಜ್ಯಸಭೆ ಮತ್ತು ಲೋಕಸಭೆಗೆ ಆಯ್ಕೆಯಾಗುವ ವ್ಯಕ್ತಿಯ ಅರ್ಹತೆಗಳೇನೆಂಬುದನ್ನು ಅವಲೋಕಿಸಿದ ಮಕ್ಕಳು ಪ್ರಜಾತಂತ್ರೀಯ ವ್ಯವಸ್ಥೆಯಲ್ಲಿ ಪ್ರಜಾಪ್ರಭುತ್ವ ಮೌಲ್ಯಗಳನ್ನು ಪ್ರತಿಯೊಬ್ಬರು ಕಟ್ಟಿಕೊಳ್ಳುವ ಪ್ರಜಾ ಪ್ರತಿನಿಧಿಯಾದವನ ಈ ಅರ್ಹತೆಗಳು ಪ್ರತಿಯೊಬ್ಬರಲ್ಲಿ ಬೆಳೆಯಬೇಕೆಂದು ಆಶಿಸಿ, ಆರೋಗ್ಯವಂತ ಸಮಾಜಕ್ಕೆ ತನ್ನ ಪಾತ್ರವೇನೆಂಬುದನ್ನು ತಿಳಿದುಕೊಳ್ಳುವರು ತನ್ನಲ್ಲಿ ಈ ನಾಯಕತ್ವದ ಗುಣಗಳನ್ನು ಅಳವಡಿಸಿಕೊಳ್ಳುವರು ಹಾಗೂ ಅನುಸರಿಸುವರು.
•    ಸಂಸತ್ತಿನ ಕಾರ್ಯಕಲಾಪಗಳಲ್ಲಿ ನಿಯಮದಂತೆ ತೊಡಗಿಕೊಳ್ಳುವ ರಾಷ್ಟ್ರಪತಿ, ಉಪರಾಷ್ಟ್ರಪತಿ, ಸಭಾಧ್ಯಕ್ಷ, ಪ್ರಧಾನಮಂತ್ರಿ ಹಾಗೂ ವಿರೋಧ ಪಕ್ಷದ ನಾಯಕರ ನಡುವಿನ ಕರ್ತವ್ಯಗಳನ್ನು ಗ್ರಹಿಸಿ, ತಮ್ಮ ಕುಟುಂಬ, ಶಾಲೆ, ಸುತ್ತಲಿನ ಸಮಾಜದಲ್ಲಿ ಸಮಾಜಮುಖಿ ಆಲೋಚನೆಗಳನ್ನು ಹೇಗೆ ರೂಪಿಸಿಕೊಳ್ಳಬಹುದು ಎಂಬುದನ್ನು ಸ್ವೀಕರಿಸಲೆತ್ನಿಸುವರು.
ಉದಾ : - ತರಗತಿ ನಾಯಕನಾಗಿ
- ಕುಟುಂಬದ ಹೊಣೆಗಾರಿಕೆ ಹೊಂದಿದವನಾಗಿ
- ಸಭೆ ಸಮಾರಂಭಗಳಲ್ಲಿ ಭಾಗವಹಿಸುವ ಜವಾಬ್ದಾರಿ ಹೊಂದುವುದು.
•    ಸಂಸತ್ತಿನ ಅಧಿಕಾರ ಮತ್ತು ಕಾರ್ಯಗಳ ಹಿನ್ನಲೆಯಲ್ಲಿ ತಮ್ಮ ಮನೆ/ಕುಟುಂಬವನ್ನೇ ಸಂಸತ್ತು ಎಂದು ಅರ್ಥೈಸಿಕೊಂಡು ಇಲ್ಲಿನ ವಿವಿಧ ಸದಸ್ಯರ ವಿವಿಧ ರೂಪದ ಕಾರ್ಯರೂಪಗಳು ಯಾವುವು ಹಾಗೂ ಮಗು ಕುಟುಂಬದಲ್ಲಿ ನನ್ನ ಹೊಣೆಗಾರಿಕೆ ಏನು ಎಂಬ ಜ್ಞಾನವನ್ನು ಸಂಪಾದಿಸಿಕೊಳ್ಳುವುದು.
ಉದಾ : - ತಂದೆ ತಾಯಿ ಜವಾಬ್ದಾರಿಗಳು
- ಮಕ್ಕಳ ಕರ್ತವ್ಯಗಳು
- ಹಿರಿಯರಾದವರ ನಡೆ ನುಡಿಗಳು
- ಊರಿನ ಪಟೇಲ, ಅಧ್ಯಕ್ಷ, ಗೌಡ, ಇವರ ಕಾರ್ಯಗಳು
•    ಸಂಸತ್ತಿನಲ್ಲಿ ವಿಶ್ವಾಸ ಕಳೆದುಕೊಂಡ ರಾಷ್ಟ್ರಪತಿ, ಪ್ರಧಾನಮಂತ್ರಿ ಅಥವಾ ಸರಕಾರ ಅವಿಶ್ವಾಸ ನಿರ್ಣಯ ಅನುಭವಿಸುವ ಸಂದರ್ಭದಿಂದ ಮಕ್ಕಳು, ತಮ್ಮ ಬದುಕಿನಲ್ಲಿ, ನಡೆ-ನುಡಿ ಆಚಾರ ವಿಚಾರಗಳಲ್ಲಿ, ಕಾರ್ಯನಿಷ್ಠೆಯಲ್ಲಿ, ಹೊಂದಾಣಿಕೆಯಲ್ಲಿನ ಅನಿವಾರ್ಯತೆಯನ್ನು ಕಂಡುಕೊಂಡು ಮೌಲ್ಯಯುಕ್ತ ಬದುಕು ಕಟ್ಟಿಕೊಳ್ಳುವರು.
ಉದಾ : - ಕಾಯಕವೇ ಕೈಲಾಸ
- ಆಳಾಗಿ ಉಣ್ಣು ಅರಸಾಗಿ ದುಡಿ
- ಸರ್ವರೊಳು ಒಂದಾಗು
- ಅತಿ ಆಸೆ ಗತಿಗೇಡು
- ನಡೆ ನುಡಿಗಳಲ್ಲಿ ಪರಿಪೂರ್ಣತೆಯಿರಲಿ
•    ಏಕರೂಪವಾಗಿರುವ ಭಾರತ ನ್ಯಾಯಾಂಗ ವ್ಯವಸ್ಥೆಯ ಪರಿಕಲ್ಪನೆಯಿಂದ, ನ್ಯಾಯವೇ ದೇವರು, ಅನ್ಯಾಯಕ್ಕೆ ಇದು ಕಾಲವಲ್ಲ. ಪ್ರಜಾಪ್ರಭುತ್ವದಲ್ಲಿ ಜನಪರ ನ್ಯಾಯಕ್ಕೆ ಅತಿ ಮೌಲ್ಯಯುತವಾದುದು, ನ್ಯಾಯಕ್ಕಿಂತ ದೊಡ್ಡವರು ಇಲ್ಲಿ ಯಾರೂ ಇಲ್ಲ ಸತ್ಯಮೇವ ಜಯತೇ. ನ್ಯಾಯವೇ ಶ್ರೇಷ್ಠ ಎಂಬ ನ್ಯಾಯಪರ ಚಿಂತನೆಗಳನ್ನು ಕಟ್ಟಿಕೊಳ್ಳುವರು.
5) ನಿರಂತರ ಮತ್ತು ವ್ಯಾಪಕ ಮೌಲ್ಯಮಾಪನಕ್ಕಿರುವ ಅವಕಾಶಗಳು
•    ಭಾರತ ಅಖಂಡತೆಯನ್ನು ಪರಿಭಾವಿಸುವುದು.
ಉದಾ : - ಪ್ರಬಂಧ ರಚನೆ
- ಚರ್ಚಾಕೂಟ
- ಭಾಷಣ ಸ್ಪರ್ಧೆ
•    ಪ್ರಜಾಪ್ರಭುತ್ವದಲ್ಲಿ ಪ್ರಜಾಪ್ರತಿನಿಧಿಗಳ ಮಹತ್ವ
ಉದಾ : - ಅರ್ಹತೆ ಕುರಿತ ಚಾರ್ಟ್ ತಯಾರಿಕೆ
- ಉತ್ತಮ ನಾಯಕನ ಗುಣಗಳ ಪಟ್ಟಿ
- ಸಂವಿಧಾನದ ಆಶಯ ಕುರಿತ ಪ್ರಬಂಧ ಮಂಡನೆ
•    ಉತ್ತಮ ಸಂಸತ್ತಿನ ಅಧಿಕಾರ ಮತ್ತು ಕಾರ್ಯಗಳು
ಉದಾ : - ಸಂಸತ್ತಿನ ಅಧಿಕಾರ ಕುರಿತು ಟಿಪ್ಪಣಿ ಸಂಗ್ರಹ
- ಮಿಂಚು ಪಟ್ಟಿ ಬಳಕೆ
•    ರಾಷ್ಟ್ರಪತಿ ಮತ್ತು ಸಂವಿಧಾನದ ಆಶಯಗಳು
ಉದಾ : - ಸಂವಿಧಾನದ ಭಾಗವಾಗಿ ರಾಷ್ಟ್ರಪತಿ ಈ ವಿಷಯ ಕುರಿತ ಭಾಷಣ ಸ್ಪರ್ಧೆ
- ಊರಿನ ಮುಖ್ಯಸ್ಥನೊಬ್ಬನ ಮೌಲ್ಯಗಳ ಪಟ್ಟಿ
- ತನ್ನ ತಂದೆಯ ವ್ಯಕ್ತಿತ್ವ ಕುರಿತು ಪ್ರಬಂಧ ರಚನೆ
•    ರಾಷ್ಟ ರಕ್ಷಣೆ
ಉದಾ : - ಸೇನೆಯ ಪಾತ್ರ ಕುರಿತು ಗುಂಪು ಚರ್ಚೆ
- ತಮ್ಮ ರಕ್ಷಣೆಗೆ ಮಕ್ಕಳು ಕೈಗೊಳ್ಳುವ ಕ್ರಮಗಳ ಸಂಗ್ರಹ
- ಹೋಮ್ ಗಾಡ್ರ್ಸ್ ಎನ್.ಸಿ.ಸಿ. ಕೆಡೆಟ್ಗಳ ಸೇವಾ ಮನೋಭಾವವನ್ನು ಅನುಸರಿಸುವುದು.
- ಸೇನೆಯ ಧೈರ್ಯೋತ್ಸಾಹವನ್ನು ಮೆಚ್ಚಿ ತಾನು ರಾಷ್ಟ್ರದ ಸೈನಿಕನಾಗಲು ತೀರ್ಮಾನಿಸುವುದು.
•    ಕಾರ್ಯಹಂಚಿಕೆ / ಅಧಿಕಾರ ವಿಕೇಂದ್ರೀಕರಣ
- ಕುಟುಂಬ ಸಂದರ್ಭದಲ್ಲಿನ ಕಾರ್ಯಕ್ರಮಗ/ಕರ್ತವ್ಯಗಳ ಹಂಚಿಕೆ
- ಶಾಲೆಯಲ್ಲಿನ ಕಲಾವಿಭಾಗ, ವಿಜ್ಞಾನ, ಗಣಿತ, ಭಾಷೆ, ಕ್ರೀಡೆ, ಸಾಂಸ್ಕೃತಿಕ ವಿಭಾಗಗಳ ನಿರ್ವಹಣೆ
- ಗ್ರಾಮ ಪಂಚಾಯಿತಿ/ಪಟ್ಟಣ ಪಂಚಾಯಿತಿ/ನಗರಸಭೆ/ಮಹಾನಗರ/ಪಾಲಿಕೆಗಳ ಅಧಿಕಾರ ನಿರ್ವಹಣೆ ಕುರಿತ ಮಾಹಿತಿ ಸಂಗ್ರಹ.
•    ಏಕರೂಪ ನ್ಯಾಯಂಗ ವ್ಯವಸ್ಥೆ
- ತಾಲ್ಲೂಕು ಮಟ್ಟದ ಸಿವಿಲ್ ಮತ್ತು ಕ್ರಿಮಿನಲ್ ನ್ಯಾಯಾಲಯಗಳಿಗೆ ಭೇಟಿ
- ತಾಲ್ಲೂಕು ಮಟ್ಟದ ಸೆಷನ್ ನ್ಯಾಯಾಲಯಗಳಿಗೆ ಭೇಟಿ
- ನ್ಯಾಯಾಧೀಶರ ಸಂದರ್ಶನ
- ಊರಿನ ವಕೀಲರೊಂದಿಗೆ ಚರ್ಚೆ
- ಸುದ್ದಿ ಮಾಧ್ಯಮಗಳಿಂದ ಉಚ್ಚ ಹಾಗೂ ಸರ್ವೋಚ್ಛ ನ್ಯಾಯಾಲಯಗಳ ಕರ್ತವ್ಯ, ದೂರು, ದುಮ್ಮಾನಗಳು, ದಂಡನೆ, ವಾದ ವಿವಾದಗಳ ಸಂಗ್ರಹ.
6) ಕಲಿಕೆಯನ್ನು ಅನುಕೂಲಿಸುವ ವಿಧಾನಗಳು
•    ಅಣಕು ಸಂಸತ್ತು ರಚನೆ
•    ಸಂದರ್ಶನ: ವಿದ್ಯಾಗಳೇ ರಾಷ್ಟ್ರಪತಿ, ಪ್ರಧಾನಮಂತ್ರಿ, ವಿರೋಧಪಕ್ಷದ ನಾಯಕ ಇತ್ಯಾದಿಯವರನ್ನು ವಿದ್ಯಾಗಳೇ ನಿರ್ವಹಿಸುವುದು/ಸಂದರ್ಶಿಸುವುದು.
•    ಲೋಕ್ ಅದಾಲತ್ ಭೇಟಿ ಮಾಡುವುದು.
•    ಅಣಕು ನ್ಯಾಯಾಂಗ ವ್ಯವಸ್ಥೆಯನ್ನು ಆಯೋಜಿಸುವುದು.
•    ತಹಶೀಲ್ದಾರ್, ಉಪವಿಭಾಗಾಧಿಕಾರ ಹಾಗೂ ಜಿಲ್ಲಾಧಿಕಾರಿಗಳ ನ್ಯಾಯಾಲಯ ಭೇಟಿ, ಕಲಾಪ ವೀಕ್ಷಣೆ.
•    ಪಂಚಾಯಿತಿ ಕಟ್ಟೆಯ ಭೇಟಿ
•    ಸುದ್ಧಿ ಮಾಧ್ಯಮಗಳಲ್ಲಿ ಪ್ರಕಟಗೊಳ್ಳುವ ಸಂಸತ್ತು, ನ್ಯಾಯಾಲಯಗಳಿಗೆ ಸಂಬಂಧಿಸಿದಂತೆ ವೀಕ್ಷಿಸುವುದು.
•    ವಿದ್ಯಾಕಾನೂನು ಅರಿವು ಕಾರ್ಯಕ್ರಮ ಆಯೋಜನೆ.
•    ಗ್ರಾಹಕರ ಹಿತರಕ್ಷಣಾ ವೇದಿಕೆಗೆ ಭೇಟಿ.
7) ಸಂಪನ್ಮೂಲಗಳ ಕ್ರೂಢೀಕರಣ
•    9ನೇ ತರಗತಿ ಸಮಾಜ-ವಿಜ್ಞಾನ ಪಠ್ಯ ಪುಸ್ತಕ
•    ಭಾರತದ ಸಂವಿಧಾನ-ಡಾ|| ರಾಜಶೇಖರಮೂರ್ತಿ
•    ಭಾರತದ ಸಂವಿಧಾನ-ಎಚ್.ಟಿ. ರಾಮಕೃಷ್ಣ
•    ಭಾರತದ ಸಂವಿಧಾನ-ಎಂ.ಎನ್. ನಂಜುಂಡಸ್ವಾಮಿ
•    ಕಾನೂನು ಕುರಿತ ಪುಸ್ತಕಗಳು
•    ಸುದ್ಧಿ ಮಾಧ್ಯಮಗಳ ಮೂಲಕ ಪ್ರಕಟಗೊಳ್ಳುವ ಪೂರಕ ಚಿತ್ರಗಳು, ವಿಷಯಾಂಶಗಳು
•    ವಕೀಲರೊಬ್ಬರನ್ನು ಶಾಲೆಗೆ ಆಹ್ವಾನಿಸಿ ಮಾಹಿತಿ ಸಂಗ್ರಹ.
8) ಬೋಧನೋಪಕರಣಗಳು
•    ಅಧಿಕಾರದ ಕಾಲಾವಧಿಯೊಂದಿಗೆ ಭಾವಚಿತ್ರಗಳು: ರಾಷ್ಟ್ರಪತಿ ಪ್ರಧಾನಮಂತ್ರಿ, ಉಪರಾಷ್ಟ್ರಪತಿ, ಸಭಾಧ್ಯಕ್ಷ, ವಿರೋಧಪಕ್ಷದ ನಾಯಕರು ಇತ್ಯಾದಿ.
•    ಸಂಸತ್ತಿನ ಚಿತ್ರಪಟ.
•    ಸಂಸತ್ತಿನ ಕಾರ್ಯಕಲಾಪಗಳು ನಡೆಯುತ್ತಿರುವ ಸಂದರ್ಭದ ಸಿ.ಡಿ. ಸಂಗ್ರಹ.
•    ಸಂಸತ್ತಿನ ಚಾರ್ಟ್
•    ನ್ಯಾಯಾಲಯಗಳ ಚಿತ್ರ - ಉಚ್ಛ ಮತ್ತು ಸರ್ವೋಚ್ಛ
•    ರಾಷ್ಟ್ರಪತಿ ಭವನದ ಚಿತ್ರ
•    ಗ್ರಾಮಪಂಚಾಯಿತಿ ನಡೆಯುತ್ತಿರುವ ಸಂದರ್ಭದ ಚಿತ್ರ.
•    ವಿದ್ಯಾಯುವ ಸಂಸತ್ತಿಗೆ ಅಣಕು ಮತದಾನ ವ್ಯವಸ್ಥೆ.
•    ರಸ್ತೆ ಸುರಕ್ಷತೆಯ ನಿಯಮಗಳ ಒಳಗೊಂಡ ಪ್ರಾತ್ಯಕ್ಷಿಕೆ.
•    ಪ್ರಾತ್ಯಕ್ಷಿಕೆ, ಪ್ರಜಾಪ್ರತಿನಿಧಿಗಳ ಆಯ್ಕೆ ಕುರಿತು
ಉದಾ: ರಾಷ್ಟ್ರಪತಿ, ಪ್ರಧಾನಮಂತ್ರಿ, ಸಭಾಧ್ಯಕ್ಷ ಇತ್ಯಾದಿ.
•    ಭೂಪಟಗಳು; ಭಾರತದ ಭೂಪಟ.
•    ರಾಷ್ಟ್ರದ ವೈವಿಧ್ಯತೆಯ ಪರಿಕಲ್ಪನೆ ಮೂಡಿಸಲು ವಿವಿಧ ರಾಜ್ಯಗಳ ವೇಷ ಭೂಷಣಗಳನ್ನು ಮಕ್ಕಳಿಗೆ ಹಾಕಿಸುವುದು.
•    ಉತ್ತಮ ಸರಕಾರದ ಅಂಶಗಳನ್ನು ಮಕ್ಕಳಿಂದ ಚಾರ್ಟ್ ಮಾಡಿಸಿ ಪ್ರದರ್ಶನ.
9) ಮನನ ಮಾಡಿಕೊಳ್ಳಲೇ ಬೇಕಾದ ಅಂಶಗಳು
•    ಕೇಂದ್ರ ಸರ್ಕಾರದ ರಚನೆ/ರಾಷ್ಟ್ರದ ಅಖಂಡತೆ
•    ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗ ವ್ಯವಸ್ಥೆಯ ಪರಿಕಲ್ಪನೆ.
•    ನಾಯಕತ್ವದ ಗುಣಗಳು
•    ಮತದಾನದ ಪ್ರಕ್ರಿಯೆ
•    ನ್ಯಾಯವೇ ಅಮೂಲ್ಯವಾದುದು
•    ಸಂವಿಧಾನದ ಮಹತ್ವ
•    ಸಂವಿಧಾನದ ಅನುಪಾಲನೆ
•    ಒಳ್ಳೆಯ ಸರಕಾರದ ಕಾರ್ಯಕ್ಷಮತೆ
•    ರಾಷ್ಟ್ರ ನಾಯಕರ ಗುಣಗಳು
•    ಸತ್ಯವೇವ ಜಯತೇ
•    ಸ್ವತಂತ್ರ ವಿಚಾರಶಕ್ತಿ
•    ಹಕ್ಕು ಮತ್ತು ಕರ್ತವ್ಯಗಳು
•    ಭಾಷಣಕಲೆ
•    ನೇರವಾದ ನಡೆ ನುಡಿ
•    ಜನಪರ ಕಾಳಜಿ
•    ಪರಸ್ಪರ ಗೌರವ ಭಾವನೆ
•    ನಿಷ್ಪಕ್ಷಪಾತ
•    ಸಾರ್ವಜನಿಕ ಹಣದ ಬಗ್ಗೆ ಎಚ್ಚರಿಕೆ
•    ಕ್ರಿಯಾಶೀಲ ತೆರಿಗೆ ವ್ಯವಸ್ಥೆ (ಪಾರದರ್ಶಕತ್ವ)
•    ರಾಷ್ಟ್ರ ರಕ್ಷಣೆ


Post a Comment

0 Comments