Thursday, March 25, 2021

ಅರ್ಥವ್ಯವಸ್ಥೆ ಮತ್ತು ಸರ್ಕಾರ

Admin       Thursday, March 25, 2021

20 ನೇ ಶತಮಾನದಲ್ಲಿ ಸರ್ಕಾರಗಳು ಆರ್ಥಿಕಾಭಿವೃದ್ಧಿಯ ತಂತ್ರವಾಗಿ ಆರ್ಥಿಕಯೋಜನೆ ಗಳನ್ನು ಜಾರಿಗೆ ತಂದವು.
• ಭಾರತದಲ್ಲಿ ಪಂಚವಾರ್ಷಿಕ ಯೋಜನೆಗಳನ್ನು ರೂಪಿಸಿದ ಸಂಸ್ಥೆ ರಾಷ್ಟ್ರೀಯ ಯೋಜನಾ ಆಯೋಗ.
• ಹನ್ನೊಂದನೇಯ ಪಂಚವಾರ್ಷಿಕ ಯೋಜನೆಯಲ್ಲಿ ಎಲ್ಲರನ್ನೊಳಗೊಂಡ ಬೆಳವಣಿಗೆಗೆ ಪ್ರಾಮುಖ್ಯತೆ ನೀಡಲಾಯಿತು.
• ಭಾರತದ ಹಸಿರು ಕ್ರಾಂತಿಯ ಪಿತಾಮಹ ಡಾ.ಎಂ.ಎಸ್.ಸ್ವಾಮಿನಾಥನ್.
• ಪರಿಸರಸ್ನೇಹಿ ಹಾಗೂ ಸುಸ್ಥಿರ ಕೃಷಿಗಾಗಿ ಸರ್ಕಾರವು ರೈತರಿಗೆ ಸಾವಯವ ಕೃಷಿ ವಿಧಾನವನ್ನು ಬಳಸುವಂತೆ ಪ್ರೋತ್ಸಾಹಿಸಿತು.
• ಸರ್ ಎಂ. ವಿಶ್ವೇಶ್ವರಯ್ಯನವರು 1934 ರಲ್ಲಿ ‘ಭಾರತಕ್ಕೆ ಯೋಜಿತ ಅರ್ಥವ್ಯವಸ್ಥೆ’ ಎಂಬ ಪುಸ್ತಕವನ್ನು ಪ್ರಕಟಿಸಿದರು.
• 1950ರಲ್ಲಿ ಭಾರತದ ಯೋಜನಾ ಆಯೋಗವನ್ನು ಸ್ಥಾಪಿಸಲಾಯಿತು.
• 1952ರಲ್ಲಿ ರಾಷ್ಟ್ರೀಯ ಅಭಿವೃದ್ಧಿ ಮಂಡಳಿಯನ್ನು ಸ್ಥಾಪಿಸಲಾಗಿದೆ.
• ಭಾರತದಲ್ಲಿ ಮೊದಲ ಪಂಚವಾರ್ಷಿಕ ಯೋಜನೆ ಎಪ್ರಿಲ್ 1, 1951ರಂದು ಜಾರಿಗೆ ಬಂದಿತು.

ಈ ಕೆಳಗಿನ ಪ್ರಶ್ನೆಗಳಿಗೆ ವಾಕ್ಯಗಳಲ್ಲಿ ಉತ್ತರಿಸಿರಿ.
1. ಆರ್ಥಿಕ ಯೋಜನೆಯ ಅರ್ಥ ತಿಳಿಸಿ.
ಸರ್ಕಾರವು ದೇಶದಲ್ಲಿರುವ ಸಂಪನ್ಮೂಲಗಳನ್ನು ಸಮರ್ಥವಾಗಿ ಬಳಸಿಕೊಂಡು ಜನರ ಸುಖವನ್ನು ಗರಿಷ್ಟ ಮಟ್ಟಕ್ಕೆ ಹೆಚ್ಚಿಸಲು,    ¥್ರeÀ Á್ಞಪೂರ್ವಕವಾಗಿ ಮತ್ತು ವಿವೇಕಯುತವಾಗಿ ಜಾರಿಗೊಳಿಸುವ ಪ್ರಕ್ರಿಯೆಯನ್ನು ಆರ್ಥಿಕ ಯೋಜನೆ ಎನ್ನುತ್ತೇವೆ.

2. ಭಾರತದ ಆರ್ಥಿಕ ಯೋಜನೆಯ ಪಿತಾಮಹ ಯಾರು?
ಸರ್. ಎಂ.ವಿಶ್ವೇಶ್ವರಯ್ಯನವರನ್ನು ಭಾರತದ ಆರ್ಥಿಕ ಯೋಜನೆಯ ಪಿತಾಮಹ ಎಂದು ಕರೆಯುತ್ತಾರೆ.

3. ಪಂಚವಾರ್ಷಿಕ ಯೋಜನೆಗಳಿಗೆ ಅನುಮೋದನೆ ನೀಡುವ ಸಂಸ್ಥೆ ಯಾವುದು?
ರಾಷ್ಟ್ರೀಯ ಅಭಿವೃದ್ಧಿ ಮಂಡಳಿಯು ಪಂಚವಾರ್ಷಿಕ ಯೋಜನೆಗಳಿಗೆ ಅನುಮೋದನೆ ನೀಡುವ ಸಂಸ್ಥೆಯಾಗಿದೆ.

4. ಜಾಗತೀಕರಣ ಎಂದರೇನು?
ಆಮದು & ರಫ್ತು ವ್ಯಾಪಾರದಲ್ಲಿ ಜಾರಿಯಲ್ಲಿದ್ದ ಸರ್ಕಾರದ ನಿಯಂತ್ರಣ ಮತ್ತು ನಿರ್ಬಂಧಗಳನ್ನು ತೆಗೆದು ಹಾಕಿ, ರಾಷ್ಟ್ರಗಳ ನಡುವೆ ಪರಸ್ಪರ ಸರಕು-ಸೇವೆಗಳು, ಬಂಡವಾಳ ಮತ್ತು ತಂತ್ರಜ್ಞಾನದ ಚಲನವಲನಕ್ಕೆ ಮುಕ್ತ ಅವಕಾಶ ಮಾಡಿಕೊಡುವುದು ಎಂದರ್ಥ.

5. ಸುಗ್ಗಿ ನಂತರದ ತಂತ್ರಜ್ಞಾನ ಎಂದರೇನು?
ಕೃಷಿ ಉತ್ಪನ್ನಗಳ ಸಂಗ್ರಹಣೆ, ಸಂಸ್ಕರಣೆ ಮತ್ತು ಮಾರಾಟದಲ್ಲಿ ಬಳಕೆಗೆ ತರಲಾದ ಸುಧಾರಿತ ತಂತ್ರಜ್ಞಾನವನ್ನು ‘ಸುಗ್ಗಿ ನಂತರದ ತಂತ್ರಜ್ಞಾನ’ ಎಂದು ಕರೆಯುತ್ತಾರೆ.

6. ಕಲ್ಯಾಣ ರಾಜ್ಯಗಳಲ್ಲಿ ಸರ್ಕಾರಗಳ ಕಾರ್ಯಕ್ಷೇತ್ರ ಹೇಗೆ ವಿಸ್ತರಣೆಗೊಂಡಿದೆ?
20ನೇ ಶತಮಾನದಲ್ಲಿ ‘ಕಲ್ಯಾಣ ರಾಜ್ಯ’ಗಳ ಉದಯದೊಂದಿಗೆ ಸರ್ಕಾರಗಳ ಕಾರ್ಯಕ್ಷೇತ್ರ ವಿಸ್ತರಣೆಯಾಯಿತು. ಸರ್ಕಾರಗಳು ಪ್ರಜೆಗಳಿಗೆ ಆಹಾರ, ಬಟ್ಟೆ, ವಸತಿ, ಶಿಕ್ಷಣ, ಆರೋಗ್ಯ, ನೈರ್ಮಲ್ಯ, ಸಾರಿಗೆ, ಸಂಪರ್ಕ ಮುಂತಾದ ಹಲವು ಸೌಕರ್ಯಗಳನ್ನು ಒದಗಿಸಿಕೊಡಲು ಮುಂದಾದವು. ಆರ್ಥಿಕ ಅಭಿವೃದ್ಧಿಯ ಪ್ರಕ್ರಿಯೆಯಲ್ಲಿ ಸರ್ಕಾರದ ಪಾತ್ರ ಹೆಚ್ಚಿನ ಪ್ರಾಮುಖ್ಯತೆ ಪಡೆಯಿತು.

7. ಪಂಚವಾರ್ಷಿಕ ಯೋಜನೆಗಳ ಉದ್ದೇಶಗಳನ್ನು ತಿಳಿಸಿ.
1. ಉತ್ಪಾದನೆಯನ್ನು ಗರಿಷ್ಟಮಟ್ಟಕ್ಕೆ ಹೆಚ್ಚಿಸುವದು.
2. ಉದ್ಯೋಗವಕಾಶಗಳನ್ನು ಹೆಚ್ಚಿಸುವದು.
3. ಆರ್ಥಿಕ ಅಸಮಾನತೆಯನ್ನು ಕಡಿಮೆ ಮಾಡುವದು.
4. ಆರ್ಥಿಕ ಸ್ಥಿರತೆಯನ್ನು ಕಾಯ್ದುಕೊಳ್ಳುವದು.
5. ಅರ್ಥವ್ಯವಸ್ಥೆಯನ್ನು ಆಧುನೀಕರಣಗೊಳಿಸುವದು.

8. ಸುಗ್ಗಿ ನಂತರದ ತಂತ್ರಜ್ಞಾನ ಎಂದರೇನು?
ಕೃಷಿ ಉತ್ಪನ್ನಗಳ ಸಂಗ್ರಹಣೆ, ಸಂಸ್ಕರಣೆ ಮತ್ತು ಮಾರಾಟದಲ್ಲಿ ಬಳಕೆ‘ಸುಗ್ಗಿ ನಂತರದ ತಂತ್ರಜ್ಞಾನಎಂದು ಕರೆಯುತ್ತಾರೆ.

9. ಸದ್ಯದಲ್ಲಿ ಕೃಷಿ ವಲಯವು ಎದುರಿಸುತ್ತಿರುವ ಸಮಸ್ಯೆಗಳಿಗೆ ಪರಿಹಾರಗಳೇನು?
1. ಸರ್ಕಾರವು ರೈತರಿಗೆ ಸಾವಯವ ಕೃಷಿ ವಿಧಾನವನ್ನು ಬಳಸುವಂತೆ ಪ್ರೋತ್ಸಾಹಿಸುತ್ತಿದೆ.
2. ರಾಸಾಯನಿಕ ಗೊಬ್ಬರಗಳಿಗೆ ಬದಲಾಗಿ ಜೈವಿಕ ಗೊಬ್ಬರ, ರಾಸಾಯನಿಕ ಕ್ರಿಮಿನಾಶಕಗಳಿಗೆ ಬದಲಾಗಿ ಜೈವಿಕ ಕ್ರಿಮಿನಾಶಕಗಳ ಬಳಕೆಗೆ ಪ್ರೋತ್ಸಾಹಿಸಲಾಗುತ್ತಿದೆ.

11. ಪಂಚವಾರ್ಷಿಕ ಯೋಜನೆಗಳ ಸಾಧನೆಗಳನ್ನು ಪಟ್ಟಿ ಮಾಡಿ.
1. ಪಂಚವಾರ್ಷಿಕ ಯೋಜನೆಗಳಿಂದಾಗಿ ರಾಷ್ಟ್ರೀಯ ಆದಾಯ & ತಲಾ ಆದಾಯಗಳು ಹೆಚ್ಚಾಗಿವೆ.
2. ಆಹಾರ ಧ್ಯಾನ್ಯಗಳ ಉತ್ಪಾದನೆಯಲ್ಲಿ ಸ್ವಾವಲಂಬನೆಯನ್ನು ಸಾಧಿಸಲಾಗಿದೆ.
3. ಕೈಗಾರಿಕೆ ಮತ್ತು ಸೇವಾವಲಯಗಳ ವಿಸ್ತರಣೆಯಿಂದ ಉದ್ಯೋಗವಕಾಶಗಳು ಹೆಚ್ಚಿವೆ.
4. ಗ್ರಾಮೀಣ ಬಡ ಜನರಿಗೆ ಉದ್ಯೋಗವಕಾಶಗಳನ್ನು ಒದಗಿಸಿಕೊಡಲು ಪ್ರಯತ್ನಿಸಲಾಗಿದೆ.
5. ವಿಜ್ಞಾನ ಮತ್ತು vಂÀ ತ್ರಜ್ಞಾನ ಕ್ಷೇv್ರದ Àಲ್ಲಿ ಅಗಾಧ ಪ್ರಗತಿ ಕಂಡು ಬಂದಿದೆ.
6. ಭಾರತದ ಅರ್ಥವ್ಯವಸ್ಥೆಯಲ್ಲಿ ಆರ್ಥಿಕ ಅಸಮಾನತೆಯನ್ನು ತಗ್ಗಿಸಲು ಪ್ರಯತ್ನಿಸಲಾಗಿದೆ.

11. ಸುಗ್ಗಿ ಪೂರ್ವ ತಂತ್ರಜ್ಞಾನ ಎಂದರೇನು?
ಕೃಷಿಯಲ್ಲಿ ಸುಧಾರಿತ ಬಿತ್ತನೆ ಬೀಜ, ರಾಸಾಯನಿಕ ಗೊಬ್ಬರ, ಕ್ರಿಮಿನಾಶಕ, ಯಂತ್ರೋಪಕರಣಗಳ ಬಳಕೆ ಮುಂತಾದವುಗಳ ಬಳಕೆಯಿಂದ ಅತಿ ಹೆಚ್ಚು ಉತ್ಪಾದನೆ ಮಾಡುವುದನ್ನು ಸುಗ್ಗಿ ಪೂರ್ವ ತಂತ್ರಜ್ಞಾನ ಎನ್ನುತ್ತೇವೆ.

12. ಹಸಿರು ಕ್ರಾಂತಿ ಎಂದರೇನು?
ಆಹಾರ ಧಾನ್ಯಗಳ ಉತ್ಪಾದನೆಯಲ್ಲಿ ಆದಂತಹ ಶೀಘ್ರ ಪ್ರಗತಿಯನ್ನು ಹಸಿರು ಕ್ರಾಂತಿ ಎಂದು ಕರೆಯಲಾಗುತ್ತದೆ.

13. ಹಸಿರು ಕ್ರಾಂತಿಗೆ ಪ್ರೇರಣೆಯಾದ ಅಂಶಗಳಾವವು?
• ಹೆಚ್ಚುತ್ತಿರುವ ಜನಸಂಖ್ಯೆಗೆ ಅನುಗುಣವಾಗಿ ಆಹಾರ ಉತ್ಪಾದನೆ ಹೆಚ್ಚಿಸುವುದು.
• ಮೆಕ್ಸಿಕೋ & ತೈವಾನ್ಗಳು ಕಡಿಮೆ ಅವಧಿಯಲ್ಲಿ ಗೋದಿಯ ಉತ್ಪಾದನೆಯಲ್ಲಿ ಅತಿಹೆಚ್ಚಿನ ಪ್ರಗತಿ ಸಾಧಿಸಿದ್ದು ಹಸಿರು ಕ್ರಾಂತಿಗೆ ಪ್ರೇರಣೆ ನೀಡಿದ ಅಂಶಗಳಾಗಿವೆ.

14. ಸರ್ಕಾರವು ಉದಾರೀಕರಣ ಪ್ರಕ್ರಿಯೆಯ ಅಡಿಯಲ್ಲಿ ಯಾವ ಕ್ರಮಗಳನ್ನು ಕೈಗೊಂಡಿದೆ?
• ಸರ್ಕಾರವು ಜನರ ಆರ್ಥಿಕ ಚಟುವಟಿಕೆಗಳ ಮೇಲಿನ ತನ್ನ ಎಲ್ಲ ಅನಗತ್ಯ ನಿಯಂತ್ರಣ ಮತ್ತು ನಿರ್ಬಂಧಗಳನ್ನು ಸಡಿಲಗೊಳಿಸಿ ಮುಕ್ತ ಅರ್ಥವ್ಯವಸ್ಥೆಗೆ ಅವಕಾಶ ಮಾಡಿಕೊಟ್ಟಿದೆ.
• ಜನರ ಆರ್ಥಿಕ ಚಟುವಟಿಕೆಗಳಲ್ಲಿ ಸರ್ಕಾರದ ಮಧ್ಯಪ್ರವೇಶವನ್ನು ಆzಂμಂಂಔ ಕಡಿಮೆ ಮಾಡಿ ಸರಕು ಸೇವೆಗಳ ಉತ್ಪಾದನೆ ಮತ್ತು ಮಾರಾಟದಲ್ಲಿ ಸ್ಪರ್ಧೆಗೆ ಅವಕಾಶ ಮಾಡಿಕೊಡುವುದು ಉದಾರೀಕರಣದ ಹಿಂದಿರುª ಆಶಯವಾಗಿದೆ.

15. ಆರ್ಥಿಕ ಸ್ಥಿರತೆ ಎಂದರೇನು?
ದೇಶದ ಅರ್ಥವ್ಯವಸ್ಥೆಯು ಹೆಚ್ಚಿನ ಏರಿಳಿತಗಳಿಲ್ಲದೆ ಪ್ರಗತಿಯತ್ತ ಸಾಗುವುದನ್ನು ಆರ್ಥಿಕ ಸ್ಥಿರತೆ ಎನ್ನುತ್ತಾರೆ.

16. ಹಸಿರು ಕ್ರಾಂತಿಯನ್ನು ಕೈಗೋಳ್ಳುವ ಸಲುವಾಗಿ ಸರ್ಕಾರ ಬಡ & ಮಧ್ಯಮ ವರ್ಗದ ರೈತರಿಗೆ ಹೇಗೆ ಸಹಾಯ ಮಾಡಿತು?
ಹಸಿರು ಕ್ರಾಂತಿಯ ಲಾಭ ಕೇವಲ ಶ್ರೀ ಮಂತ ರೈತರಿಗೆ ಮಾತ್ರ ತಲುಪಿದೆ. ಏಕೆಂದರೆ ಸುಧಾರಿತ ಬೀಜ, ರಾಸಾಯನಿಕ ಗೊಬ್ಬರ, ಕ್ರಿಮಿನಾಶಕ ಮುಂತಾದವುಗಳನ್ನು ಕೊಳ್ಳುವ ಶಕ್ತಿ ಬಡ ರೈತರಿಗೆ ಇರಲಿಲ್ಲ. ಆದ್ಧರಿಂದ ಸರ್ಕಾರವು ಬಡ ರೈತರಿಗೆ ಸಹಾಯ ಮಾಡಲು ಹಲವಾರು
ಕ್ರಮಗಳನ್ನು ಕೈಗೊಂಡಿದೆ.
1. ಸಹಾಯ ಧನ ವ್ಯವಸ್ಥೆಯನ್ನು ಜಾರಿಗೊಳಿಸಿತು.
2. ಬೀಜ, ರಾಸಾಯನಿಕ ಗೊಬ್ಬರ, ಕ್ರಿಮಿನಾಶಕ, ಯಂತ್ರೋಪಕರಣಗಳು ಮುಂತಾದವುಗಳನ್ನು ಅತ್ಯಂತ ಕಡಿಮೆ ಬೆಲೆಯಲ್ಲಿ ವಿತರಿಸಲು ಮುಂದಾಗಿದೆ.
3. ರೈತರಿಗೆ ಬ್ಯಾಂಕುಗಳು ಮತ್ತು ಸಹಕಾರಿ ಸಂಘಗಳ ಮೂಲಕ ಕಡಿಮೆ ಬಡ್ಡಿದರದಲ್ಲಿ ಸಾಲ ಒದಗಿಸಲು ಕ್ರಮಕೈಗೊಳ್ಳಲಾಗಿದೆ.

17. ಡಾ. ಎಂ.ಎಸ್.ಸ್ವಾಮಿನಾಥನ್ರವರನ್ನು ಭಾರt‘ಹಸಿರು ಕ್ರಾಂತಿಯ ಪಿತಾಮಹ’ ಎಂದು ಕರೆಯಲು ಕಾರಣವೇನು?
ಭಾರತದ ಕೃಷಿಯಲ್ಲಿ ಸುಧಾರಿತ ತಂveÀ್ರ Á್ಞನವನ್ನು ಬಳಕೆಗೆ ತರುವಲ್ಲಿ ಕೃಷಿ ವಿಜ್ಞಾನಿ ಡಾ. ಎಂ.ಎಂ.ಸ್ವಾಮಿನಾಥನ್ರವರ ಪಾತ್ರ ಪ್ರಮುಖವಾದುದು. ಹಾಗಾಗಿ ಇವರು ಭಾರತದ ‘ಹಸಿರು ಕ್ರಾಂತಿಯ ಪಿತಾಮಹ’ ಎನಿಸಿದ್ದಾರೆ.

18. ಜಾಗತೀಕರಣದಿಂದಾಗುವ ಸಕಾರಾತ್ಮಕ ಪರಿಣಾಮಗಳಾವುವು?
1. ಆಧುನಿಕ ತಂತ್ರಜ್ಞಾನ ಮತ್ತು ವಿದೇಶಿ ಬಂಡವಾಳದ ಒಳಹರಿವಿಗೆ ಅವಕಾಶ ಮಾಡಿಕೊಟ್ಟಿದೆ.
2. ಉತ್ಪಾದನೆಯಲ್ಲಿ ದಕ್ಷತೆ ಮತ್ತು ಗುಣಮಟ್ಟ ಹೆಚ್ಚಲು ಸಾಧ್ಯವಾಗಿದೆ.
3. ಲಭ್ಯವಿರುವ ಸಂಪನ್ಮೂಲಗಳನ್ನು ಸಮರ್ಪಕವಾಗಿ ಬಳಸಿಕೊಂಡು ಉತ್ಪಾದಕತೆಯನ್ನು ಹೆಚ್ಚಿಸಲು ಸಾಧ್ಯವಾಗುತ್ತಿದೆ.
4. ನಮ್ಮ ಅರ್ಥವ್ಯವಸ್ಥೆಯು ಅಂತರಾಷ್ಟ್ರೀಯ ಸ್ಪರ್ಧೆಯನ್ನು ಎದುರಿಸಲು ಸಮರ್ಥವಾಗುವಂತಾಗಿದೆ.

19. ಜಾಗತೀಕರಣದಿಂದಾಗುವ ನಕಾರಾತ್ಮಕ ಪರಿಣಾಮಗಳಾವುವು?
1. ದೊಡ್ಡ & ಬಹುರಾಷ್ಟ್ರೀಯ ಕೈಗಾರಿಕೆಗಳ ಸ್ಪರ್ಧೆಯನ್ನು ಎದುರಿಸಲಾಗದೆ ಮಧ್ಯಮ ಮತ್ತು
1. ಸಣ್ಣ ಕೈಗಾರಿಕೆಗಳು ನಶಿಸುತ್ತವೆ.
2. ನಗರ-ಗ್ರಾಮೀಣ & ಬಡವ-ಬಲ್ಲಿದರ ನಡುವಿನ ಅಂತರ ಅಗಾಧವಾಗಿ ಹೆಚ್ಚತೊಡಗಿದೆ.
3. ಕೃಷಿ ಸರಕುಗಳಿಗೆ ನ್ಯಾಯೋಚಿತ ಬೆಲೆ ದೊರಕದೆ ರೈತರ ಆತ್ಮಹತ್ಯೆಗಳು ಹೆಚ್ಚುತ್ತಿವೆ. ಕಾರ್ಮಿಕರು ಅಭದ್ರತೆಯನ್ನು ಎದುರಿಸುವಂತಾಗಿದೆ.

logoblog

Thanks for reading ಅರ್ಥವ್ಯವಸ್ಥೆ ಮತ್ತು ಸರ್ಕಾರ

Previous
« Prev Post

No comments:

Post a Comment