ದುಡಿಮೆ ಮತ್ತು ಆರ್ಥಿಕ ಜೀವನ
ಮುಖ್ಯಾಂಶಗಳು:
• ಶ್ರಮ ವಿಭಜನೆಯು ವಿಶೇಷ ಪರಿಣತಿಗೆ ಕಾರಣವಾಗುವದು.
• ವಿಶೇಷ ತರಬೇತಿ ಹೊಂದಿರದ ಕಾರ್ಮಿಕರನ್ನು ಅಸಂಘಟಿತ ಕೆಲಸಗಾರರು ಎಂದು ಕರೆಯುತ್ತೇವೆ.
• ಕೇಂದ್ರ ಸರಕಾರ ಸಮಾನ ವೇತನ ಕಾಯ್ದೆಯನ್ನು 1976 ರಲ್ಲಿ ಜಾರಿಗೆ ತಂದಿತು.
ಈ ಕೆಳಗಿನ ಪ್ರಶ್ನೆಗಳಿಗೆ ಉತ್ತರಿಸಿರಿ.
1. ಕೂಲಿ ಸಹಿತ ದುಡಿಮೆ ಎಂದರೇನು?
ಕೂಲಿ, ಸಂಬಳ ಅಥವಾ ಇನ್ನಾವುದೇ ಭೌತಿಕ ರೂಪದ ಪ್ರತಿಫಲ ನೀಡುವ ದುಡಿಮೆಯ ಚಟುವಟಿಕೆಯನ್ನು ಕೂಲಿಸಹಿತ ದುಡಿಮೆ ಎಂದು ಕರೆಯುತ್ತಾರೆ.
2. ನಿರುದ್ಯೋಗ ಎಂದರೇನು?
ನಿರುದ್ಯೋಗ ಎಂದರೆ ದುಡಿಯುವ ವಯಸ್ಸು, ಸಾಮಥ್ರ್ಯ, ಆಸಕ್ತಿ, ಅರ್ಹತೆ ಇದ್ದರೂ ಉದ್ಯೋಗ ಸಿಗದ ಪರಿಸ್ಥಿತಿ ಎಂದರ್ಥ.
3. ನಿರುದ್ಯೋಗಕ್ಕೆ ಕಾರಣಗಳಾವವು?
ನಿರುದ್ಯೋಗಕ್ಕೆ ಹಲವಾರು ಕಾರಣಗಳಿವೆ. ಅವುಗಳಲ್ಲಿ ಅತಿಯಾದ ಜನಸಂಖ್ಯೆ, ಯಾಂತ್ರಿಕರಣ. ಅತಿಯಾದ ಶ್ರಮವಿಭಜನೆ, ಸಾಮಾಜಿಕ ಅಸಮಾನತೆ, ಬಂಡವಾಳದ ಕೊರತೆ, ಅನಕ್ಷರತೆ ಮುಂತಾದವು.
4. ನಿರುದ್ಯೋಗದ ಪರಿಣಾಮಗಳಾವವು?
ನಿರುದ್ಯೋಗವು ಸಮಾಜದ ಮೇಲೆ ಕೆಟ್ಟ ಪರಿಣಾಮವನ್ನು ಬೀರುತ್ತದೆ. ನಿರುದ್ಯೋಗ ಸಮಸ್ಯೆಯು ಬಡತನ, ಅನಾರೋಗ್ಯ, ಭಷ್ಟಾಚಾರ, ಕೌಟಂಬಿಕ ವಿಘಟನೆ, ಮೋಸ, ವಂಚನೆ, ಕಳ್ಳತನ, ವ್ಯಭಿಚಾರ ಮುಂತಾದ ಪರಿಣಾಮಗಳಿಗೆ ಕಾರಣವಾಗುವದು.
5. ನಿರುದ್ಯೋಗದ ಪ್ರಕಾರಗಳಾವವು? ತಿಳಿಸಿ.
ನಿರುದ್ಯೋಗದಲ್ಲಿ ಹಲವಾರು ಪ್ರಕಾರಗಳನ್ನು ಕಾಣಬಹುದು. ಅವುಗಳೆಂದರೆ- ಅರೆನಿರುದ್ಯೋಗ, ಮರೆಮಾಚಿದ ನಿರುದ್ಯೋಗ, ತಾಂತ್ರಿಕ ನಿರುದ್ಯೋಗ, ಚಕ್ರೀಯ ನಿರುದ್ಯೋಗ, ಸ್ವಇಚ್ಛೆಯ ನಿರುದ್ಯೋಗ.
6. ದುಡಿಮೆಯಲ್ಲಿನ ತಾರತಮ್ಯತೆಯ ಸ್ವರೂಪಗಳನ್ನು ವಿವರಿಸಿ.
• ದುಡಿಮೆ ಮತ್ತು ಕೂಲಿ ಹಂಚಿಕೆಯಲ್ಲಿ ಕಾಣಬರುವ ಈ ಅಸಮಾನತೆಯನ್ನು ದುಡಿಮೆಯ ತಾರತಮ್ಯ ಅಥವಾ ದುಡಿಮೆಯಲ್ಲಿ ಬೇಧ - ಭಾವ ಎನ್ನಬಹುದು.
• ಭಾರತವನ್ನೊಳಗೊಂಡಂತೆ ಜಗತ್ತಿನ ದೇಶಗಳಲ್ಲಿ ಪುರುಷರಿಗಿಂತ ಉತ್ತಮ ಸ್ವರೂಪದ ಉದ್ಯೋಗಗಳನ್ನು ನೀಡಲಾಗುತ್ತಿದೆ.ಹಾಗೆಯೇ ಹೆಚ್ಚಿನ ಹೊಣೆಗಾರಿಕೆ & ಸಂಬಳ ನೀಡಲಾಗುತ್ತಿದೆ.
• ಸ್ತ್ರೀಯರಿಗೆ ಕಡಿಮೆ ಮಟ್ಟದ ಉದ್ಯೋಗ, ಹೊಣೆಗಾರಿಕೆ & ಸಂಬಳವನ್ನು ನೀಡಲಾಗುತ್ತಿದೆ. ¥ಂಂgಂಂμಂರಿUಇ ಸರಿಸಮಾನವಾಗಿ ಮಹಿಳೆಯರು ದುಡಿದರೂ ಸಂಬಳ ಮಾತ್ರ ಕಡಿಮೆ ನೀಡಲಾಗುತ್ತಿದೆ.
7. ಶ್ರಮ ವಿಭಜನೆ ಎಂದರೇನು?
ಒಂದು ಕೆಲಸವನ್ನು ಜನರು ತಮ್ಮ ಆಸಕ್ತಿ, ಅಭಿರುಚಿ, ಸಾಮಥ್ರ್ಯ, ವಯಸ್ಸು, ವಿಶೇಷ ಪರಿಣಿತಿ, ಕೌಶಲ್ಯ ಹಾಗೂ ಲಿಂಗಭೇದಗಳ ಆಧಾರದ ಮೇಲೆ ಹಂಚಿಕೊಂಡು ಮಾಡುವುದನ್ನು
‘ಶ್ರಮ ವಿಭಜನೆ’ ಎಂದು ಕರೆಯುತ್ತಾರೆ.
8. ನಿರುದ್ಯೋಗ ಸಮಸ್ಯೆಗೆ ಪರಿಹಾರ ಕ್ರಮಗಳಾವವು? ವಿವರಿಸಿ.
• ಜನಸಂಖ್ಯಾ ನಿಯಂತ್ರಣ ಕ್ರಮಗಳು,
• ಗುಡಿ ಕೈಗಾರಿಕೆಗಳಿಗೆ ಪ್ರೋತ್ಸಾಹ,
• ಕೃಷಿ & ಕೈಗಾರಿಕಾ ಕ್ಷೇತ್ರದ ಅಭಿವೃದ್ಧಿ,
• ಶೈಕ್ಷಣಿಕ ಸುಧಾರಣಾ ಯೋಜನೆಗಳು,
• ವೃತ್ತಿಪರ ಶಿಕ್ಷಣಕ್ಕೆ ಪ್ರೋತ್ಸಾಹ,
• ಗ್ರಾಮೀಣಾಭಿವೃದ್ಧಿ ಯೋಜನೆಗಳು,
• ಉದ್ಯೋಗ ಖಾತರಿ ಯೋಜನೆಗಳು ಇತ್ಯಾದಿ.
9. ದುಡಿಮೆ ಎಂದರೇನು?
ವ್ಯಕ್ತಿಯೋರ್ವನ ಶಕ್ತಿಯ ವ್ಯಯದಿಂದ ಅಥವಾ ಪರಿಶ್ರಮದಿಂದ ಆತನಿಗೆ ಆರ್ಥಿಕ ಅಥವಾ ವಸ್ತು ರೂಪದ ಪ್ರತಿಫಲ ಸಿಗುವುದಿದ್ದರೆ ಅದನ್ನು ದುಡಿಮೆ ಎನ್ನಬಹುದು.
10. ವಿಶೇಷ ಪರಿಣತಿ ಎಂದರೇನು?
ವಿಶೇಷ ಪರಿಣತಿ ಎಂದರೆ ಯಾವುದಾದರೂ ನಿರ್ದಿಷ್ಟ ಕ್ಷೇತ್ರವೊಂದರಲ್ಲಿ ಸಾಕಷ್ಟು ಆಳವಾದ ಪರಿಣತಿ, ತರಬೇತಿ ಅಥವಾ ಕೌಶಲ್ಯ ಪಡೆಯುವದು ಎಂದರ್ಥ.
11. ಸಂಘಟಿತ ಮತ್ತು ಅಸಂಘಟಿತ ಕೆಲಸಗಾರರ ನಡುವಿನ ವ್ಯತ್ಯಾಸಗಳಾವವು?
ಸಂಘಟಿತ ಕೆಲಸಗಾರರು:
• ಕಾನೂನು, ಕಾಯ್ದೆಗಳಿಗೆ ಬದ್ಧವಾದಂತಹ ನಿಗದಿತ ಕಾರ್ಯಕ್ಷೇತ್ರದಲ್ಲಿ ಕೆಲಸ ಮಾಡುವವರನ್ನು ಸಂಘಟಿತಕೆಲಸಗಾರರು ಎಂದು ಕರೆಯುತ್ತಾರೆ.
• ಸಂಘಟಿತ ಕೆಲಸಗಾರರಿಗೆ ವಿಶೇಷ ಪರಿಣತಿ, ತರಬೇತಿ, ಅನುಭವ & ಶೈಕ್ಷಣಿಕ ಅರ್ಹತೆಗಳಿಗೆ ಅವಕಾಶಗಳಿರುತ್ತವೆ.
• ಇವರಿಗೆ ನಿಗದಿತ ವೇತನ, ಭತ್ಯೆ, ವಿರಾಮ ವೇತನ, ನಿವೃತ್ತಿ ವೇತನ ಸೌಲಭ್ಯಗಳನ್ನು ನೀಡಲಾಗುತ್ತದೆ.
• ಇವರಿಗೆ ಕೆಲಸದ ಖಾತರಿ ಇರುತ್ತದೆ.
ಅಸಂಘಟಿತ ಕೆಲಸಗಾರರು
• ಯಾವುದೇ ನಿರ್ದಿಷ್ಟ ಕಾಯ್ದೆ ಕಾನೂನು ನಿಯಂತ್ರಣಕ್ಕೆ ಒಳಪಡದೆ ಜೀವನ ನಿರ್ವಹಣೆಗಾಗಿ ಕೆಲಸ ಮಾಡುವ ದಿನಗೂಲಿ ಕೆಲಸಗಾರರನ್ನು ಅಸಂಘಟಿತ ಕೆಲಸಗಾರರು ಎಂದು ಕರೆಯಲಾಗುತ್ತದೆ.
• ಅಸಂಘಟಿತ ಕೆಲಸಗಾರರಿಗೆ ವಿಶೇಷ ಪರಿಣತಿ, ತರಬೇತಿ, ಅನುಭವ ಇರುವುದಿಲ್ಲ.
• ಇವರ ಕೆಲಸಕ್ಕೆ ಭದ್ರತೆ & ನಿಗದಿತ ವೇತನ, ವಿರಾಮ ವೇತನ, ನಿವೃತ್ತಿ ವೇತನ ಹಾಗೂ ಭತ್ಯೆಗಳ ಸೌಲಭ್ಯವಿರುವದಿಲ್ಲ.
• ಕೆಲಸದ ಖಾತರಿಯೂ ಸಹ ಇರುವದಿಲ್ಲ.
Thursday, March 25, 2021
Home »
social science notes
» ದುಡಿಮೆ ಮತ್ತು ಆರ್ಥಿಕ ಜೀವನ
ದುಡಿಮೆ ಮತ್ತು ಆರ್ಥಿಕ ಜೀವನ
Admin Thursday, March 25, 2021
Thanks for reading ದುಡಿಮೆ ಮತ್ತು ಆರ್ಥಿಕ ಜೀವನ
Previous
« Prev Post
« Prev Post
Next
Next Post »
Next Post »
Copyright ©
TechHilt. All rights reserved.
No comments:
Post a Comment